ಸಕಲ ವಿಸ್ತಾರದ ರೂಪು ನಿಮ್ಮೊಳಗಿರ್ಪುದು : ನೀವೆನ್ನ ಮನದಲ್ಲಿ ಅಡಗಿರ್ಪಿರಿ. ಅದೆಂತೆಂದೊಡೆ : ಕರಿ ಕಣ್ಣಾಲಿಯೊಳಗಡಗಿದಂತೆ ನೀವು ಭಕ್ತಜನಮನೋವಲ್ಲಭನಾದ ಕಾರಣ ಎನ್ನ ಮನದ ಕೊನೆಯಮೊನೆಯಲ್ಲಿ ಅಡಗಿರ್ದಿರಯ್ಯಾ ಅಖಂಡೇಶ್ವರಾ.