ಸಕಳ ನಿಷ್ಕಳವ ಕೂಡಿಕೊಂಡಿಪ್ಪೆಯಾಗಿ ಸಕಳ ನೀನೇ ನಿಷ್ಕಳ ನೀನೇ ಕಂಡಯ್ಯಾ. `ವಿಶ್ವತಶ್ಚಕ್ಷು' ನೀನೇ ದೇವಾ `ವಿಶ್ವತೋಮುಖ' ನೀನೇ ದೇವಾ `ವಿಶ್ವತೋಬಾಹು' ನೀನೇ ದೇವಾ ಕೂಡಲಸಂಗಮದೇವಾ.±