ಸತ್ತು ಪಿಡಿವರೆಲ್ಲ ಹೋಗುವರೆಲ್ಲ


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸತ್ತು ಹೋಗುವರೆಲ್ಲ ಸ್ವರ್ಗಪದಸ್ಥರೆ ? ಅಲ್ಲಲ್ಲ. ಕೈದುವ ಪಿಡಿವರೆಲ್ಲ ಮಹಾಕಲಿಗಳೆ ? ಅಲ್ಲಲ್ಲ. ಲಿಂಗವ ಧರಿಸುವರೆಲ್ಲ ಲಿಂಗಪ್ರಾಣಿಗಳೆ ? ಅಲ್ಲಲ್ಲ. ಅದೇನು ಕಾರಣವೆಂದಡೆ : ಕಪಿಯ ಕೈಯಲ್ಲಿ ರತ್ನವ ಕೊಟ್ಟಡೆ ಅದು ಹಣ್ಣೆಂದು ಕಡಿದು ನೋಡಿ ಕಲ್ಲೆಂದು ಬಿಸುಟುವುದಲ್ಲದೆ
ಆ ರತ್ನದ ದಿವ್ಯಬೆಳಗನರಿವುದೆ ಅಯ್ಯಾ ? ಇಂತೀ ದೃಷ್ಟದಂತೆ ಮಡ್ಡಜೀವಿಗಳ ಕೈಯಲ್ಲಿ ದೊಡ್ಡಲಿಂಗವಿರ್ದಡೇನು ? ಆ ಲಿಂಗದಲ್ಲಿ ಮಹಾಘನ ಪರಮಕಲೆಯನರಿಯದ ಬಳಿಕ ಅದು ಒಡ್ಡುಗಲ್ಲಿನಂತೆ ಕಂಡೆಯಾ ಅಖಂಡೇಶ್ವರಾ ?