ಸತ್ತ ಬಳಿಕ ಮುಕ್ತಿಯ ಹಡೆದೆಹೆನೆಂದು ಪೂಜಿಸ ಹೋದಡೆ ಆ ದೇವರೇನ ಕೊಡುವರೊ ? ಸಾಯದೆ ನೋಯದೆ ಸ್ವತಂತ್ರನಾಗಿ ಸಂದುಭೇದವಿಲ್ಲದಿಪ್ಪ ಗುಹೇಶ್ವರಾ ನಿಮ್ಮ ಶರಣ.