ಸತ್ಯಮುಕ್ತಿಯ ಕಳೆಯ ನೋಡಾ ನಿತ್ಯತತ್ವದ ಇರವ ನೋಡಾ ಮೂರೊಂದಾದ ಆರೂಢನ ನೋಡಾ ಕೂಡಲಸಂಗಮದೇವರಲ್ಲಿ ತದ್ಗತನಾಗಿಪ್ಪ ಮರುಳಶಂಕರದೇವರ ನಿಲವ ಪ್ರಭು ಸಿದ್ಧರಾಮಯ್ಯದೇವರಿಂದ ಕಂಡು ಬದುಕಿದೆನು