ಸತ್ಯವ ನುಡಿಯದು ಸದಾಚಾರದಲ್ಲಿ ನಡೆಯದು ಭಕ್ತಿಯ ಪಿಡಿಯದು ಮುಕ್ತಿಯ ಪಡೆಯದು ಸುಡು ಸುಡು ಈ ಮನದ ಯುಕ್ತಿಯ. ಅಖಂಡೇಶ್ವರಾ ನಿಮ್ಮ ಭಕ್ತಿಯ ಭಾವದಲ್ಲಿರಿಸಿ ಸಲಹಯ್ಯ ಎನ್ನ ನಿಮ್ಮ ಧರ್ಮ ನಿಮ್ಮ ಧರ್ಮ.