Chaithra m
ನನ್ನಹೆಸರು ಚೈತ್ರ.ಎಮ್ ನಾನು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ನನ್ನಪದವಿ ಮುಂದುವರೆಸುತ್ತಿದ್ದೆನೇ.ನಾನು ಇಂತಹ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದೇನೆ ಎಂದರೆ ಅದು ಕೇವಲ ನನ್ನಕುಟುಂಬದವರಿಂದ ಅವರ ಪ್ರೊತ್ಸಾಹದಿಂದ ಮಾತ್ರ .ನಾನು ಯಳಚಾಮನಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದೆನು .ನನ್ನ ತಂದೆ ಮುನಿರಾಜು ತಾಯಿ ಶೋಭ.ನನಗೆ ಮೊದಲಿನಿಂದಲೂ ಓದಿನಲ್ಲಿ ಆಸಕ್ತಿ ಜಾಸ್ತಿ .ಎಲ್ಲಾದರಲ್ಲೂಎಲ್ಲಾರ ಹಾಗೆ ನಾನು ಇರಬೇಕು ಅವರಿಗಿಂತ ಯಾವುದರಲ್ಲೂ ಕಡಿಮೆ ಯಾಗಬಾರದೆಂಬ ಆಸೆ. ನನ್ನ ಜೀವನದ ಗುರಿ ಏನೆಂದರೆ,ನಾನು ಐ ಎ ಎಸ್ ಆಫೀಸರ್ ಆಗಿ ಒಳ್ಳೆಯ ಘನತೆ ಗೌರವ ಗಳಿಸಿ ನನ್ನ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ನನ್ನ ತಂಗಿಯಂದಿರುನ್ನು ಒಳ್ಳೆಯ ಉದ್ಯೋಗ ದಲ್ಲಿ ಸೇರಿಸಬೇಕು ಎಂಬ ಆಸೆ .ನಾನು ಒಂದರಿಂದ ಐದನೇ ತರಗತಿಯವರೆಗೂ ಊರಿನಲ್ಲೇ ಓದಿ ಮುಂದಿನ ಅಭ್ಯಾಸಕ್ಕಾಗಿ ಪಕ್ಕದ ಊರಿಗೆ ಹೋಗುತ್ತಿದ್ದೆ.ಶಿಕ್ಷಕರಿಗೆ ನನ್ನನ್ನು ಕಂಡರೆ ಬಹಳ ಇಷ್ಟ ಏಕೆಂದರೆ ಎಲ್ಲಾದರಲ್ಲೂ ನಮ್ಮ ಶಾಲೆಯಲ್ಲಿ ನಾನೇ ಮುಂದಿರುತ್ತಿದೆ,ಮತ್ತು ಮೊಟ್ಟಮೊದಲು ಬಾರಿ ಎಂಟನೇ ತರಗತಿಯಲ್ಲಿ ನನಗೆ ನಾಲ್ಕು ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಬಂತು ಆಗ ನಮ್ಮಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ನನ್ನ ಮೇಲೆ ಅಪಾರವಾದ ಗೌರವ ಏರ್ಪಟ್ಟಿತು.ಅಂದಿನಿಂದ ಎಲ್ಲಾರಿಗೂ ನಾನೆಂದೆರೆ ತುಂಬಾ ಇಷ್ಟ .ಮತ್ತು ನಾನು ಎಸ್ ಎಸ್ ಎಲ್ ಸಿ ಯಲ್ಲಿದ್ದಾಗ ಪ್ರವಾಸ ಹೋಗಿದ್ದೆವು.ಕರ್ನಾಟಕದ ಎಲ್ಲಾಐಸಿಹಾಸಿಕ ಸ್ಥಳಗಳನ್ನು ನೋಡಿದೆ . ಉದಾ: ಬಾದಾಮಿ,ಐಹೊಳೆ ,ಪಟ್ಟದಕಲ್ಲು,ಹಂಪೆ,ಹಳೆಯ ರಾಜಮನೆತನಗಳ ರಾಜರು ವಾಸಿಸಿದ ಸ್ಥಳಗಳು,ಮೈಸೂರಿನ ಅರಮನೆ ,ಮುಂತಾದವು .ನನ್ನ ಸಹಪಾಠಿಗಳುಮತ್ತು ಶಿಕ್ಷಕರೊಂದಿಗೆ ಹೋದ ಐದು ದಿನಗಳ ಪ್ರವಾಸ ಬಹಳ ಚೆನ್ನಾಗಿತ್ತು .ಅಲ್ಲಿನ ಕೆಲವು ಕವಿಗಳ ಬಗ್ಗೆ ತಿಳಿದುಕೊಂಡ ವಿಚಾರಗಳು ನನ್ನ ಮನಸ್ಸಿನ ಮೇಲೆ ತುಂಬಾನೆ ಪ್ರಭಾವ ಬೀರಿತು. ನಾನು ಎಸ್ ಎಸ್ ಎಲ್ ಸಿ ಯ ಫಲಿತಾಂಶ ದಿನ ತುಂಬಾನೆ ಭಯ ಆಗಿತ್ತು ಯಾಕೆಂದರೆ ನನಗಿಂತ ಯಾರಾದರೂ ಶಾಲೆಗೆ ಮೊದಲು ಬರುತ್ತಾರೇನೋ ಅಂತ .ಆದರೆ ನಾನೇ ನಮ್ಮ ಶಾಲೆಯಲ್ಲಿ ಎಲ್ಲಾರಿಗಿಂತ ಹೆಚ್ಚುಅಂಕ ಪಡೆದು ಕೊಂಡೆ .ಆಗ ನನ್ನ ಕುಟುಂಬದವರ ಮುಖದಲ್ಲಿದ್ದಸಂತೋಷ ಎಷ್ಟುಕೋಟಿ ಕೊಟ್ಟರು ಸಿಗಲಾರದು .ಮತ್ತು ನಾನು ಎಸ್ ಎಸ್ ಎಲ್ ಸಿಯಲ್ಲಿ ಹೆಚ್ಚು ಅಂಕ ಗಳಿಸಿದೆನೆಂದು ನನಗೆ ಬಹುಮಾನ ಕೊಡುವ ದಿನ.ಆ ದಿನವನ್ನು ನನ್ನ ಈ ಜೀವನದಲ್ಲೇ ಮರೆಯಲಾರೆ.ನಾನು ಬಹುಮಾನವನ್ನು ತೆಗೆದುಕೊಳ್ಳಲು ಹೋಗುವಾಗ ಎಲ್ಲಾರು ತಟ್ಟುವ ಚಪ್ಪಾಳೆ ತುಂಬಾನೆ ಖುಷಿ ಪಡಿಸಿತು.ಆಗ ಅವರು ಆ ಜೋರಾದ ಚಪ್ಪಾಳೆ ತಟ್ಟುವಾಗ ನನಗೆ ಎಲ್ಲಿಲ್ಲದ ಆನಂದ .ನನ್ನ ಕುಟುಂಬದವರು ಸಹ ಅವಅಲ್ಲಿಗೆ ಬಂದಿದ್ದರು.ಆಗ ಎಲ್ಲಾರು ಅವರನ್ನು ಇವರು ನಿಮ್ಮ ಮಗಳೇನಾ? ಎಂದು ಕೇಳಿದಾಗ ಅವರ ಸಂತೋಷ ಅಷ್ಟಿಷ್ಟಲ್ಲ ಆ ಬಹುಮಾನವು ನನಗೆ ಆಸ್ಕರ್ ಪ್ರಶಸ್ತಿಯಂತೆ ಕಾಣಿತು.ನಂತರ ನಾನು ಒಂದೆರಡು ಮಾತುಗಳನ್ನು ಮಾತಾನಾಡಿದೆ.ಆಗ ಎಲ್ಲಾರು ನೀವು ಸ್ವಾಮಿ ವಿವೇಕಾನಂದರ ಹಾಗೆ ತುಂಬಾ ಚೆನ್ನಾಗಿ ಮಾತಾನಾಡುತ್ತೀರಿ?.ಎಂದಾಗ ನನಗೆ ಬಹಳ ಖುಷಿ ಆಯ್ತು, ಕೊನೆಯದಾಗಿ ನನ್ನತಂದೆ ತಾಯಿ ನನ್ನ ಕುಟುಂಬವರನ್ನುಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆ ನನಗೆ.ನನಗೆ ಎರಡು ಆಸೆಗಳು ಒಂದು ನಾನು ಐಎ ಎಸ್ ಆಫೀಸರ್ ಆಗಬೇಕು ,ಎರಡು ಕುವೆಂಪು ಅವರು ಹುಟ್ಟಿದ ಸ್ಥಳವಾದ ಮಲೆನಾಡು ,ಮಡಿಕೇರಿ ನೋಡಬೇಕು ನನ್ನ ಈ ಎಲ್ಲಾ ಸುಖಸಂತೋಷಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಅವಕಾಶ ಮಾಡಿಕ್ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು.