Deepika v s
ನನ್ನ ಹೆಸರು ದೀಪಿಕ.ವಿ.ಎಸ್. ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ಮಾರ್ಚ್ ೨೨ ೧೯೯೭ ರಂದು ಹುಟ್ಟಿದೆ. ನನ್ನ ತಂದೆ ಸುರೇಶ್.ಜಿ. ಬಿ.ಎಂ.ಟಿ.ಸಿ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಸುಮಾರು ೧೬ ವರ್ಷಗಳಿಂದ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ತಾಯಿ ವೀಣಾ.ಎಸ್.ಬಿ ಯವರು ಗೃಹಿಣಿ. ನಾನು ಹುಟ್ಟಿದ್ದು ಹಾಸನದಲ್ಲಾದರು ಬೆಳೆದದ್ದು ಬೆಂಗಳೂರಿನಲ್ಲಿ. ಪ್ರಸ್ತುತ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ಪದವಿಯನ್ನು ಪಡೆಯುತ್ತಿದ್ದೇನೆ. ನನ್ನ ಹವ್ಯಾಸಗಳೆಂದರೆ ಪುಸ್ತಕಗಳು ಓದುವುದು, ಹಾಡುವುದು, ನೃತ್ಯ ಮಾಡುವುದು, ಇತ್ಯಾದಿ. ಕಥೆ ಹಾಗೂ ಕಾದಂಬರಿಗಳನ್ನು ಓದುವುದು ನನ್ನ ನೆಚ್ಚಿನ ಹವ್ಯಾಸವಾಗಿದೆ. ನನ್ನ ವಿದ್ಯಾಭ್ಯಾಸ ಬಗ್ಗೆ ಹೇಳಬೇಕೆಂದರೆ ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬೆಂಗಳೂರಿನ ಲೇಡಿ ವೇಲಾಂಕಿಣಿ ಶಾಲೆಯಲ್ಲಿ ಮುಗಿಸಿದೆ. ನಂತರ ಎಸ್.ಎಸ್.ಎಲ್.ಸಿಯಲ್ಲಿ ಶೇಕಡ ೮೪.೬೪ ರಷ್ಟು ಪಡೆದು ಉತ್ತೀರ್ಣರಾದೆ. ನಂತರ ನಾನು ಕ್ರೈಸ್ಟ್ ಜೂನಿಯರ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ನಾನು ನನ್ನ ದ್ವಿತೀಯ ಪಿ.ಯು.ಸಿಯನ್ನು