Kaveramma
Joined ೧೯ ಜೂನ್ ೨೦೧೫
ನನ್ನ ಹೆಸರು ಶಾವ್ಯ ಕಾವೇರಮ್ಮ. ನನ್ನ ಜನನ ಮಾರ್ಚ್ ೧೬,೧೯೯೭. ನನ್ನ ಹುಟ್ಟಿದ ಊರು ಕಿರುಗೂರು ಗ್ರಾಮ, ವಿರಾಜುಪೇಟೇ ತಾಲೂಕು, ಕೊಡಗು ಜಿಲ್ಲೆ.ನನ್ನ ತಂದೆಯ ಹೆಸರು ಪೂಣ್ಣಚ್ಚ. ನನ್ನ ತಾಯಿಯ ಹೆಸರು ರೀಟಾ ಪೂಣ್ಣಚ್ಚ. ನನಗೆ ಇಬ್ಬರು ಅಕ್ಕಂದಿರು ಇದ್ದಾರೆ. ಮೊದಲನೆಯವಳ ಹೆಸರು ಶ್ರುತಿ. ಎರಡನೆಯವಳ ಹೆಸರು ಶೆರ್ಲಿ. ನನ್ನ ತಂದೆ ವ್ಯವಸಾಯ ಮಾಡುತ್ತಿದ್ದರೆ, ತಾಯಿ ಗೃಹಿಣಿ .
ನಾನು ನನ್ನ ಬಗ್ಗೆ ಹೆಚ್ಚು ವಿವರವನ್ನು ಬರೆಯಲು ಬಯಸುತ್ತೇನೆ. ನನಗೆ ಕನ್ನಡ, ಆಂಗ್ಲ ಭಾಷೆ, ಹಿಂದಿ, ಕೊಡವ ಭಾಷೆ ಬರುತ್ತದೆ . ನಾನು ನನ್ನ ಪ್ರಾರ್ಥಮಿಕ ವಿದ್ಯಾಭ್ಯಾಸವನ್ನು ಸಾಯಿ ಶಂಕರ್ ಶಾಲೆಯಲ್ಲಿ ಮುಗಿಸಿದ್ದೇನೆ. ನಾನು ೧೦ನೇ ತರಗತಿಯಲ್ಲಿ ಆದರ್ಶ ವಿದ್ಯಾರ್ಥಿನಿ ಎಂಬ ಬಿರುದನ್ನು ಗಳಿಸಿರುತ್ತೇನೆ. ನನ್ನ ಪದವಿಪೂರ್ವ ವಿದ್ಯಾಭ್ಯಾಸವನ್ನು ಲಯನ್ಸ್ ಪಿ.ಯು.ಕಾಲೇಜಿನಲ್ಲಿ ಮಾಡಿದ್ದೇನೆ.ನನ್ನ ಬಿ.ಕಾಂ ಪದವಿಯನ್ನು ಕ್ರೈಸ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನಾನು ಅಂತಿಮ ಪದವಿಪೂರ್ವ ತರಗತಿಯಲ್ಲಿ ೯೨ ಶೇಖಡ ಅಂಕ ಗಳಿಸಿದ್ದೇನೆ. ನನ್ನ ಹವ್ಯಾಸಗಳು ಪುಸ್ತಕ ಓದುವುದು, ಹಾಡು ಕೇಳುವುದು, ನಾಣ್ಯ ಸಂಗ್ರಹಣೆ, ಕಾಲುಚೆಂಡು ಆಡುವುದು ಇತ್ಯದಿ. ನಾನು ರಾಜ್ಯ ಮಟ್ಟದ ಕಾಲುಚೆಂಡು ಆಟದಲ್ಲಿ ಎರಡನೆಯ ಸ್ಥಾನವನ್ನು ಗಳಿಸಿರುತ್ತೇನೆ.ನನಗೆ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ. ನನ್ನ ಹುಟ್ಟಿದ್ದ ಊರು, ಮಡಿಕೇರಿ ಒಂದು ಪ್ರಸಿದ್ದ ತಾಣವಾಗಿದೆ.ಬೇರೆ ಬೇರೆ ಊರಿನಿಂದ ಜನರು ಅಲ್ಲಿಗೆ ಪ್ರವಾಸ ಬರುತ್ತಾರೆ.ನಾನು ತುಂಬಾ ಮೃದು ಸ್ವಾಭಾವದ ಹುಡುಗಿ. ನನಗೆ ಸ್ನೆಹಿತರ ಜೊತೆ ಬೆರೆಯಲು ತುಂಬಾ ಇಷ್ಟ.ನನಗೆ ಬೇರೆಯವರಿಗೆ ಸಹಾಯ ಮಾಡುವ ಗುಣವಿದೆ. ನಾನು ಚೆನ್ನಾಗಿ ಓದಿ ಒಳ್ಳೆಯ ಹುದ್ದೆಯನ್ನು ಪಡೆಯ ಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದೆನೆ. ನನಗೆ ಬದುಕಿನಲ್ಲಿ ಕುತೂಹಲಕಾರಿ ವಿಚಾರಗಳನ್ನು ತಿಳಿಯಬೇಕೆಂಬ ಆಸೆ. ನನಗೆ ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ವಾಸ ಮಾಡುವುದು ಕಷ್ಟಕರವಾಗಿದೆ. ನನಗೆ ಪ್ರಾಣಿ ಹಿಂಸೆ ಮಾಡುವುದು, ಸ್ವಛ್ಛತೆಯನ್ನು ಕಾಪಾಡದೆ ಇರುವುದು, ಇತರರಿಗೆ ತೊಂದರೆ ಉಂಟು ಮಾಡುವುದು, ಅಸಭ್ಯವಾಗಿ ವರ್ತಿಸುವುದು , ಇವುಗಳೆಲ್ಲವನ್ನು ಸಹಿಸಲು ಅಸಾಧ್ಯ. ನನಗೆ ಜಗತ್ತನ್ನು ಸುತ್ತಬೇಕೆಂಬ ಕನಸು ಇದೆ. ನನಗೆ ನಮ್ಮ ಊರಿನ ಪ್ರಕೃತಿ, ಭಾಷೆ, ಸಂಸ್ಕೃತಿ, ಉಡುಗೆ-ತೊಡುಗೆ, ಆಚಾರ-ವಿಚಾರ ಮನಸ್ಸಿಗೆ ಖುಷಿ ಕೊಡುತ್ತದೆ. ನನಗೆ ನನ್ನ ಜೀವನವನ್ನು ಒಳ್ಳೆಯ ರೀತಿಯಲ್ಲಿ ಶ್ರಮ ಪಟ್ಟು ಮತ್ತು ಚೆನ್ನಾಗಿ ಕಷ್ಟ ಪಟ್ಟು ದುಡಿದು ಜೀವನವನ್ನು ಸುಂದರವಾದ ರೀತಿಯಲ್ಲಿ ರೂಪಿಸಿಕೊಳ್ಳಬೇಕೆಂಬ ಕನಸನ್ನು ಹೊಂದಿದ್ದೇನೆ. ನಾನು ಕಾಯಕವೇ ಕೈಲಾಸ ಎಂಬ ಗಾದೆಮಾತನ್ನು ಬೆಂಬಲವಾಗಿ ಇಟ್ಟುಕೊಂಡು ಜೀವನವನ್ನು ಕಳೆಯುತ್ತಿದ್ದೇನೆ.