ನನ್ನ ಹೆಸರು ಪೃಥ್ವಿ.ಎಸ್, ನಾನು ಹುಟ್ಟಿದ್ದು ಮಾರ್ಚ್ ೦೩ ೧೯೯೮, ತಮಿಳುನಾದಿನಲ್ಲಿ, ಆದ್ದರೆ ನನ್ನ ಎಲ್ಲ ಓದಿನ ವ್ಯಸನ್ಗವನ್ನು ಕರ್ನಾಟಕದಲ್ಲಿ ಮಾಡಿದ್ದೇನೆ. ನನ್ನ ತಂದೆತಾಯಿಯರ ಬಗ್ಗೆ ಹೇಳಬೇಕೆಂದರೆ, ನನ್ನ ತಂದೆಯ ಹೆಸರು ಶಂಕರ್ ರೆಡ್ಡಿ, ತಾಯಿಯ ಹೆಸರು ಪ್ರೇಮ.

ನಾನು ಎಲ್.ಕೆ.ಜಿ ಇಂದ ಎರಡನೇ ತರಗತಿಯವರೆಗು ಅರವಿಂದ್ ಶಾಲೆಯಲ್ಲಿ ಓದಿದೆ. ಮೂರನೇ ತರಗತಿಯಿಂದ ಹತ್ತನೆ ತರಗತಿಯಿಂದ ಜಯಶ್ರೀ ಶಾಲೆಯಲ್ಲಿ ಓದಿದೆ. ಈಗ ಆ ಜಯಶ್ರೀ ಶಾಲೆ ನ್ಯೂ ಬಾಲ್ಡ್ವಿನ್ ಶಾಲೆಯಾಗಿದೆ. ಆಗು ನನ್ನ ಪಿ.ಯು.ಸಿ ಯನ್ನು ಸ್ವಾಮಿ ವಿವೇಕಾನಂದದಲ್ಲಿ ಮಾಡಿದೆ. ಮತ್ತು ಇತರೆ ಮುಂದಿನ ಓದನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದೀನಿ.

ನನ್ನಗೆ ಒಬ್ಬ ತಮ್ಮನು ಸಹ ಇದ್ದನೆ, ಅವನ ಹೆಸರು ಪುನಿತ್ ಕುಮಾರ್. ಇವನು ಈಗ ಹತ್ತನೇ ತರಗತಿ ಓದುತ್ತಿದ್ದನೆ. ಇವನಿಗೆ ಓದ್ದಿನಲ್ಲಿ ನನಗಿನಥಲು ಬಹಳ ಅಪಾರ ಆಸಕ್ತಿ. ಎಲ್ಲಾ ಪರಿಕ್ಷೆಗಳಲ್ಲು ಮೊದಲನೆಯ ಸ್ತಾನ ಪಡೆಯಬೇಕೆಂಬ ಆಸೆ.

ಇನ್ನು ನನ್ನ ತಂದೆ ತಾಯಿಯ ಬಗ್ಗೆ ಹೇಳಬೆಕೆಂದರೆ , ನಮ್ಮ ಕುಟುಂಬ ಹೇಳಿಕೊಳ್ಳಲಿಕೆ ಏನು ಅತಿ ದೊಡ್ಡ ಶ್ರೀಮಂತ ಕುಟುಂಬವಲ್ಲ, ಆದರು ನಮ್ಮ ಊರಿನಲ್ಲಿ ಅತಿ ಅಪಾರವಾದ ಗೌರವ ಎಲ್ಲರಿಂದಲು ನಮಗೆ ಸಿಗುತ್ತದೆ. ಇದಕ್ಕೆ ಕಾರಣ ನಮ್ಮ ತಂದೆ ತಾಯಿಯ ಶ್ರಮ. ನನ್ನ ತಂದೆ ಹೊಲದಲ್ಲಿ ವ್ಯವಸಾಯ ಮಾಡುತ್ತಾರೆ, ಇನ್ನು ತಾಯಿ ಮನೆ ಮತ್ತು ಅಂಗಡಿಯನ್ನು ನೋಡಿಕ್ಕೊಳ್ಳುತ್ತಾರೆ.

ಇನ್ನು ನನ್ನ ಬಗ್ಗೆ ಹೇಳಬೇಕಾದರೆ, ನನಗೆ ನ್ರುತ್ಯ ಮತ್ತು ಕ್ರೀಡೆಗಳಲ್ಲಿ ಬಹಳ ಆಸಕ್ತಿ, ಆದ್ದರೆ ಇವತ್ತಿನವರೆಗು ಯಾವತ್ತು ಸಹ ದೊಡ್ಡ ಮಟ್ಟದಲ್ಲಿ ಬಾಗವಹಿಸಿಲ್ಲ. ಆದ್ದರೆ ಶಾಲೆಯಲ್ಲಿ ಇರುವಾಗ, ಶಾಲೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಬಾಗವಹಿಸುತ್ತಿದ್ದೆ. ಕ್ರೀಡೆಗಳ್ಳಿಗೆ ಬಂದರೆ ಖೋ-ಖೋ ಮತ್ತು ತ್ರೋಬಾಲ್ಗಳಲ್ಲಿ ಬಹಳ ಆಸಕ್ತಿ. ಈ ಎರಡು ಕ್ರೀಡೆಗಳಲ್ಲಿ ಪ್ರಶಸ್ತಿಗಳು ಸಹ ದೊರತಿವೆ.

ಓದಿನ ವಿಚಾರಕ್ಕೆ ಬಂದರೆ ಕಂಪ್ಯೂಟರ್ ವಿಷಯದಲ್ಲಿ ಬಹಳ ಆಸಕ್ತಿ. ನನ್ನ ಹೆಚ್ಚಿನ ಸಮಯವನ್ನು ನಾನು ನನ್ನ ಸ್ನೇಹಿತರೊಡನೆ ಇರುತ್ತೇನೆ. ನನ್ನ ಎಲ್ಲಾ ಸ್ನೇಹಿತರು ನನ್ನ ಎಲ್ಲಾ ಕಷ್ಟಸುಖಗಳಲ್ಲಿ ತೋಡಾಗಿ ಇರುತ್ತಾರೆ. ನನಗೆ ಯಾವುದೇ ಸಹಾಯ ಬೇಕಾದರು ಮಾಡಲು ಸಿದ್ದರಾಗಿರುತ್ತಾರೆ. ಇಂಥಹ ಒಳ್ಳೆಯ ಸ್ನೇಹಿತರು ಮತ್ತು ತಂದೆ ತಾಯಿಯರನನ್ನು ಕೊಟ್ಟಿರುವುದಕ್ಕೆ ನಾನು ದೇವರಿಗೆ ರುಣಿಯಾಗಿರುತ್ತೇನೆ.

ನನ್ನ ಜೀವನದಲ್ಲಿ ಸಿ.ಎ ಮಾಡಬೇಕೆಂಬ ಆಸಕ್ತಿ. ಆಗು ನನ್ನದೇಯಾದ ಅಂತರಾಷ್ಟರೀಯ ವ್ಯಾಪಾರವನ್ನು ಮಾಡಬೇಕು. ಹಾಗು ಅನಾತ ಮಕ್ಕಳಿಗಾಗಿ ಅನಾತಾಶ್ರಮವನ್ನು ನಿರ್ಮಿಸಬೇಕು. ಹಾಗು ಸಮಾಜದಲ್ಲಿ ಒಂದು ಒಳೆಯ ಹೆಸರನ್ನುಗಳಿಸಬೇಕು. ಇದು ನನ್ನ ಮತ್ತು ನನ್ನ ತಂದೆ ತಾಯಿಯ ಕನಸ್ಸು. ಅತೀಬೇಗ ಈ ಕನಸ್ಸು ನನಸಾಗಬೇಕೆಂಬ ಆಸೆ.

ಇದು ನನ್ನ ಚಿಕ್ಕ ಸುಂದರ ವಿವರಗಳು.