ನನ್ನ ಹೆಸರು ರಾಧಾ.ವಿ. ನಾನು ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ. ಪದವಿಯನ್ನು ಓದುತ್ತಿದ್ದೇನೆ. ರಸಾಯನಶಾಸ್ತ್ರದಲ್ಲಿ ನನಗೆ ಹೆಚ್ಚಿನ ಆಸಕ್ತಿ ಇದ್ದು, ಮುಂದಿನ ವಿದ್ಯಾಭ್ಯಾಸ ಅದೇ ವಿಷಯದಲ್ಲಿ ಮಾಡುತ್ತೇನೆ. ನನಗೆ ನಾಲ್ಕು ಭಾಷೆಗಳು ಬರುತ್ತವೆ ಕನ್ನಡ, ಹಿಂದಿ, ತೆಲುಗು ಮತ್ತು ಆಂಗ್ಲ ಭಾಷೆ. ನನ್ನ ತಂದೆ-ತಾಯಿಯರು ನನಗೆ ವಿದ್ಯಾಭ್ಯಾಸ ವಲ್ಲದೆ ಭರತನಾಟ್ಯ, ಶಾಸ್ತ್ರೀಯ ಸಂಗೀತ ಮುಂತಾದ ಕಲೆಗಳನ್ನೂ ಸಹ ಕಲಿಸಿಕೊಟ್ಟರು. ನಾನು ಭರತನಾಟ್ಯದಲ್ಲಿ ವಿದ್ವಿತ್ತನ್ನು ಅಭ್ಯಾಸ ಮಾಡುತ್ತಿದ್ದು,

ನನಗೆ ಈ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳು ಬಂದಿವೆ. ನನಗೆ ಕರ್ನಾಟಕ ಸರ್ಕಾರದಿಂದ "ಕಲಾಶ್ರೀ" ಪ್ರಶಸ್ತಿ ಬಂದಿದೆ. ನಾನು ಒಬ್ಬ ಕ್ರೀಡಾಪಟು. ನಾನು ರಾಜ್ಯ ಮಟ್ಟದ ಸ್ಕೇಟರ್. ಗುಜರಾತ್, ಮಹಾರಾಷ್ಟ್ರ, ದೆಹಲಿ ಮುಂತಾದ ಹೊರರಾಜ್ಯಗಳಲ್ಲಿ
ನಾನು ನನ್ನ ಕಲೆಯನ್ನು ಪ್ರದರ್ಶಿಸುತ್ತಿದ್ದೇನೆ. ನನಗೆ ಪುಸ್ತಕಗಳನ್ನು ಓದಲು ಅಷ್ಟು ಆಸಕ್ತಿ ಇಲ್ಲ ಆದರೆ ಜೆ.ಕೆ.ರೌಲಿಂಗ್ ರವರು ಬರೆದಿರುವ "ಹಾರಿ ಪಾಟರ್" ಪುಸ್ತಕವು ಬಹಳ ಹಿಡಿಸಿತು.

ನನಗೆ "ವೆನಿಸ್" ಮತ್ತು ಇತರ ದೇಶಗಳಿಗೆ ಪ್ರವಾಸ ಮಾಡಬೇಕೆಂಬ ಆಸೆ. ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕೆಂಬ ಛಲವಿದೆ. ನನಗೆ ನನ್ನ ತಂದೆ ತಾಯಿ ಇಬ್ಬರೇ ಸ್ಪೂರ್ತಿ. ನಾನು ನನ್ನ ಸುತ್ತ ಮುತ್ತಲಿನವರನ್ನು ಖುಷಿಯಾಗಿ ಇಡಲು ಬಯಸುತ್ತೇನೆ. ಜೀವನವು ಒಂದು ಆಟವಾಗಿದ್ದು ನಾನು ಒಬ್ಬ ಕ್ರೀಡಾಪಟುವಾಗಿ ಎಲ್ಲ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸುತ್ತೇನೆ


This user is a member of WikiProject Education in India

ಉಪಪುಟಗಳು

ಸಂಪಾದಿಸಿ

In this ಸದಸ್ಯspace:

ಸದಸ್ಯ:
Radhachrist
ಸದಸ್ಯರ ಚರ್ಚೆಪುಟ: