ನನ್ನ ಹೆಸರು ರಂಜಿನಿ.ಜಿ. ನನ್ನ ತಂದೆಯ ಹೆಸರು ಗಣೇಶನ್.ಎಸ್. ನನ್ನ ತಾಯಿಯ ಹೆಸರು ಸತ್ಯ.ಜಿ. ನನಗೆ ಒಬ್ಬಳು ತಂಗಿ ಇದ್ದಾಳೆ ಅವಳ ಹೆಸರು ಸ್ವಾತಿ.ಜಿ. ಅವಳು ಶ್ರೀ ಚೆನ್ನಕೇಶವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತೆನೆಯ ತರಗತಿ ಹೋದ್ಧುತಿದ್ದಾಳೆ. ನಾನು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ಧೇನೆ. ನಾನು ೧೨ನೇ ಜೂನ್ ೨೦೦೦ದಲ್ಲಿ ತಮಿಳುನಾಡಿನ ಮದುರೈನಲ್ಲಿ ಜನಿಸಿದ್ದು. ನಾನು ಹುಟ್ಟಿದ್ದು ತಮಿಳುನಾಡಿನಲ್ಲಾದರೂ ಓದಿದ್ದು ಬೆಳೆದಿದ್ದು ಬೆಂಗಳೂರಿನಲ್ಲಿಯೇ.

         ನಾನು ನನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹೊಸರೋಡಿನ ಶ್ರೀ ಚೆನ್ನಕೇಶವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದೆ. ನಂತರ ನನ್ನ ಪಿ.ಯು.ಸಿ ಯನ್ನು ಚಂದಾಪುರದಲ್ಲಿರುವ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದೆ. ಈಗ ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್.ಸಿ. ಪದವಿಯನ್ನು  ಸಿ.ಎಮ್.ಇ.ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದೇನೆ. ನಾನು ಗಣಕಯಂತ್ರ ವಿಷಯದಲ್ಲಿ ಅನೇಕ ಸಾದನೆಗಳನ್ನು ಮಾಡಬೇಕೆಂದು ಆಶಿಸುತ್ತೇನೆ.
         ನನಗೆ ನನ್ನ ತಾಯಿ ಎಂದರೆ ತುಂಬಾ ಪ್ರೀತಿ. ಅವರ ಜೊತೆಗೆ ಸಮಯ ಕಳೆಯುವುದು ನನಗೆ ತುಂಬಾ ಸಂತೋಷವನ್ನು ಕೊಡುತ್ತದೆ. ನನಗೆ ಚಲನಚಿತ್ರಗಳು ನೋಡಲು ತುಂಬಾ ಇಷ್ಟ. ಹಬ್ಬಗಳ ಸಂಭ್ರಮದ ವೇಳೆಯಲ್ಲಿ ಚಲನಚಿತ್ರ ನೋಡದೆ ಹಬ್ಬ ಚೆನ್ನಾಗಿರುವುದಿಲ್ಲ. ಕಥೆ ಪುಸ್ತಕಗಳನ್ನು ಓದುವುದು ಎಂದರೆ ನನಗೆ ಪ್ರಾಣ .ನೀತಿ ಕಥೆಗಳು ಓದಳು ತುಂಬ ರಸಿಕರವಾಗಿರುತ್ತದೆ. ರಾಮಾಯಣ ಮತ್ತು ಮಹಾಭಾರತ ಅಂತಹ ಮಹಾಗ್ರಂಥಗಳು ಓದುವ ಅಭ್ಯಾಸವಿದೆ. ನನ್ನ ತಂದೆ-ತಾಯಿ ನನ್ನ ಬಗ್ಗೆ ಹೆಮ್ಮೆ ಪಡುವಂತಹ ಒಳ್ಳೆಯ ಉದ್ಯೋಗಕ್ಕೆ  ಸೇರಿ ಅವರನ್ನು ತುಂಬಾ ಸಂತೋಷವಾಗಿ ನೋಡಿಕೊಳ್ಳ ಬೇಕೆಂಬುದು ನನ್ನ ಕನಸು.
         ನಾನು ಒಬ್ಬ ಪರಿಸರ ಸ್ನೇಹಿ. ನನಗೆ ಗಿಡಗಳನ್ನು ನೆಡುವುದರ ಜೊತೆಗೆ ಬೆಳೆಸುವ ಹವ್ಯಾಸವಿದೆ. ನಾನು ಪರಿಸರಕ್ಕೆ ಏನಾದರೊಂದು ಕೊಡುಗೆ ಕೊಡಲು ಆಶಿಸುತ್ತೇನೆ. ನಾನು ಹೆಚ್ಚು ಮರಗಳನ್ನು ಬೆಳೆಸಲು ಬಯಸುತ್ತೇನೆ. ನಾವು ಎಲ್ಲಾ ರೀತಿಯಲ್ಲಿ ಪರಿಸರದೊಂದಿಗೆ ಪರಸ್ಪರವಾಗಿದ್ದೇವೆ. ಇವತ್ತಿನ ದಿನಗಳಲ್ಲಿ ಪರಿಸರವು ಹಾನಿಗೆ ಒಳಪಟ್ಟಿದೆ. ನಾವು ಜಗತ್ತನ್ನು ಎಚ್ಚರಿಸಬೇಕಾಗಿದೆ. ಎಲ್ಲರು ಕನಿಷ್ಟಪಕ್ಷ ಒಂದು ಗಿಡವನ್ನಾದರು ಬೆಳೆಸಬೇಕು. ನನಗೆ ಆ ತರಹದ ವಾತವರಣವು ಕ್ರೈಸ್ಟ್ ವಿಶ್ವವಿದ್ಯಾಲಯಲ್ಲಿ ಸಿಕ್ಕಿದೆ. ನನ್ನ ಕಾಲೇಜು ಸದಾ ಹಚ್ಚ ಹಸಿರಿನ ಮರಗಳಿಂದ ತುಂಬಿದೆ.
         ನಾನು ಗಣಕಯಂತ್ರ (ಕಂಪ್ಯೂಟರ್) ಕ್ಷೇತ್ರದಲ್ಲಿ ಅಶಕ್ತಿಯನ್ನು ಹೊಂದಿದ್ದೇನೆ. ನಾನು ಎಲ್ಲರನ್ನು ಗಣಕಯಂತ್ರ (ಕಂಪ್ಯೂಟರ್) ವಿಷಯವನ್ನು ಓದಲು ಪ್ರೋತ್ಸಾಹಿಸುತ್ತೇನೆ . ನನಗೆ ಹಲವಾರು ಸಾಧನೆಗಳನ್ನು ಮಾಡುವ ಆಸೆ. ನಾನು ಗಣಕಯಂತ್ರ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುತ್ತೇನೆ. ನನಗೆ ವಿಶ್ವದ ಏಳು ಅದ್ಭುತಗಳ ಸ್ಥಳಗಳಿಗೆ ಭೇಟಿ ಕೊಟ್ಟು,ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆ. ಮಾನವ ನಿರ್ಮಿತ ಮತ್ತು ನೈಸರ್ಗಿಕ ವಿಸ್ಮಯಗಳ ವಿಶ್ವದ ಅದ್ಭುತಗಳನ್ನು ಗುರುತಿಸಲು ಕಾಲಕಾಲಕ್ಕೆ ಹಲವಾರು ರೀತಿಯ ಪಟ್ಟಿಗಳನ್ನು ಮಾಡಲಾಗುತ್ತಿದೆ. ಇದರ ಜೊತೆಗೆ ನಾನು ಹಲವಾರು ಸ್ಥಳಗಳಿಗೆ ಬೇಟಿ ನೀಡಿ, ಮಾಹಿತಿಯ ಸಂಗ್ರಹವನ್ನು ಮಾಡುವ ಕನಸಿದೆ.


This user is a member of WikiProject Education in India

ಉಪಪುಟಗಳು

ಸಂಪಾದಿಸಿ

In this ಸದಸ್ಯspace:

ಸದಸ್ಯ:
Ranjini166
ಸದಸ್ಯರ ಚರ್ಚೆಪುಟ: