ನನ್ನ ಹೆಸರು ಸಾಗರಿಕಾ, ಅದು ನನ್ನ ತಂದೆ ತಾಯಿ ನನಗಿಟ್ಟ ಹೆಸರು. ನನ್ನ ತಾಯಿ ನನಗೆ ಈ ಹೆಸರನ್ನೇ ಇಡಬೇಕೆಂದು ಬಹಳ ವರ್ಷಗಳಿಂದ ಯೋಚಿಸಿದ್ದಳಂತೆ. ನನ್ನೂರು ಚಿಕ್ಕಮಗಳೂರು, ಅಂದರೆ ಚಿಕ್ಕಮಗಳೂರಿನಿಂದ ೪೦ ಕಿ.ಮಿ. ದೂರದಲ್ಲಿ ಮುತ್ತೋಡಿ ಕಾಡಿನ ಸಮೀಪದಲ್ಲಿರುವ ಗಾಡಿಗುಡ್ಡ ನನ್ನೂರ ಹೆಸರು. ಸುತ್ತಲು ಕಾಫಿ ತೋಟ, ಅಡಿಕೆ, ಮರಗಳ ಮಧ್ಯೆ ನನ್ನ ಮನೆ ಇದೆ. ಅಲ್ಲಿಗೆ ಹೋಗುವುದೆಂದರೆ ನನಗೆ ಬಹಳ ಇಷ್ಟ, ಕಾರಣ ಅತ್ಯಂತ ನಿಶಬ್ಧತೆಯಿಂದ ಕೂಡಿರುವ ಆ ಜಾಗದಲ್ಲಿ ಮನಸ್ಸು ಬಹಳ ಶಾಂತವಾಗಿರುತ್ತದೆ. ನಾನು ಚಿಕ್ಕಂದಿನಿಂದಲೇ ಮನೆಯಿಂದ ದೂರವಿದ್ದು ಬೆಳೆದೆ. ಮೂರು ವರ್ಷಗಳಿದ್ದಾಗ ಹಾಸನದಲ್ಲಿ ನಮ್ಮ ಅಜ್ಜಿಯ ಮನೆಯಲ್ಲಿ ಬೆಳೆದೆ. ಹಾಗಾಗಿ ನನ್ನ ಮನೆಗೆ ಹೊಗುವುದೆಂದರೆ ನನಗೆ ಎಲ್ಲಿಲ್ಲದ ಖುಷಿ. ಚಿಕ್ಕವಳಾಗಿದ್ದಾಗ ನಾನು ಬಹಳ ಮಾತನಾಡುತ್ತಿದೆ ಎಂದು ಈಗಲೂ ನನ್ನಮ್ಮ ಹೇಳುತ್ತಾಳೆ. ವರ್ಷಗಳು ಕಳೆದಂತೆ ನನ್ನ ಮಾತು ಕಡಿಮೆಯಾಯಿತು. ಚಿಕ್ಕಮಗಳೂರಿನ ಹಾಸ್ಟೆಲ್ಲಿನಲ್ಲಿ ಓದುತ್ತಿದ್ದ ನಾನು ಹೈಸ್ಕೂಲಿಗಾಗಿ ಬೆಂಗಳೂರಿನ ಎಸ್.ಎಫ಼್.ಎ‍ಕ್ಸ್(S.F.X) ಶಾಲೆಗೆ ಸೇರಿಕೊಂಡೆ. ಆ ಶಾಲೆ ನನಗೆ ಒಂದು ತಿರುವನ್ನೆ ನೀಡಿತು, ಬಹಳ ಸ್ವಾವಲಂಭಿಯಾಗಿ ಧೈರ್ಯವಾಗಿ ಬದುಕುವುದನ್ನು ನಾನು ಅಲ್ಲಿಂದ ಕಲಿತುಕೊಂಡೆ. ಜೊತೆಗೆ ಸಾಕಷ್ಟು ಶಿಸ್ತು ಸಂಯಮಗಳು ನನ್ನೊಳಗೆ ಮೂಡಿದವು. ನಂತರದ ದಿನಗಳಲ್ಲಿ ಮೌಂಟ್ ಕಾರ್ಮೆಲ್ ಕಾಲೇಜಿಗೆ ಸೇರಿದಾಗ ಬೇರೆಯದೇ ಜೀವನ ಶೈಲಿ. ಪಿ.ಜಿ.ಯಲ್ಲಿ ಉಳಿದುಕೊಂಡಿದ್ದ ನನಗೆ ಸಹಗೆಳತಿಯರೊಂದಿಗೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವೆ ಆಯಿತು. ಸ್ವಲ್ಪ ಸ್ವಾತಂತ್ರ ಬದುಕು, ಹಣವನ್ನು ಹೇಗೆ ಸರಿಯಾಗಿ ಖರ್ಚು ಮಾಡಬೇಕೆಂಬುವುದನ್ನು ಕಲಿಸಿತು. ಕೆಲುವೊಮ್ಮೆ ಸ್ವಲ್ಪ ಏರುಪೇರು ಆದಗ ಅದರಿಂದ ಆದಾಗ ಬುದ್ದಿಯನ್ನು ಕಲಿತೆ. ಕಾಲೇಜ್ ಬದುಕಿನ ಬಣ್ಣದ ದಿನಗಳಲ್ಲಿ ನನಗೆ ಕಂಡದ್ದು ಬೆಂಗಳೂರಿನಂತಹ ದೊಡ್ಡ ಪಟ್ಟಣದಲ್ಲಿರುವ ಯಾವುದೋ ಮೂಲೆಯಲ್ಲಿ ಸರಿಯಾದ ಆಶ್ರಮವಿಲ್ಲದ ಓದುಬರಹ ತಿಳಿಯದೆ ಬೆಳೆಯುತ್ತಿದ್ದ ಮಕ್ಕಳ ಒಂದು ಎನ್.ಜಿ.ಒ.(N.G.O.) ಸಂಸ್ಥೆ. ಆ ಸಂಸ್ಥೆಯ ಉದ್ದೇಶಗಳು ನನಗೆ ಹೊಸ ದೃಷ್ಟಿಯನು ನೀಡಿತು. ಆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಾರದ ಕೆಲವು ಘಂಟೆಗಳನ್ನು ಮೀಸಲಿಟ್ಟೆ. ಆ ಮಕ್ಕಳಿಗೆ ಪಾಠ ಹೇಳಿಕೊಡುವುದು ಸಂತೋಷ ತರುತ್ತದೆ. ಸಮಾಜದಲ್ಲಿ ಹಿಂದುಳಿದ ಹಾಗೂ ಅವಕಾಶದಿಂದ ವಂಚಿತವಾದವರಿಗೆ ನಮ್ಮ ಕೈಲಾದ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ. ನಮ್ಮಂತಹ ಯುವ ಜನತೆ ಈ ಕಾರ್ಯಕ್ಕೆ ಮುಂದಾಗಬೇಕು. ಈಗ ನಾನು ಡಿಗ್ರೀ ತರಗತಿಯಲ್ಲಿ ಓದುತ್ತಿದೇನೆ. ಮೊದಲಿಗಿಂತ ಜಾವಬ್ದಾರಿಗಳು ಹೆಚ್ಚಿವೆ. ನನ್ನ ಮುಂದಿನ ಗುರಿ ಸ್ಪಷ್ಟವಾಗಿದೆ, ಅದರ ಕಡೆಗೆ ಹೆಚ್ಚಿನ ಗಮನ. ಮನೆ, ತಂದೆ-ತಾಯಿ, ತಂಗಿ, ಸ್ನೇಹಿತರು, ಎಲ್ಲರೊಂದಿಗಿನ ಬಾಂಧವ್ಯ ಇನ್ನಷ್ಟು ಬೆಳಗೊಂಡಿದೆ. ನಾನು ನನ್ನ ಸಮಾಜ ಹಾಗೂ ನನ್ನ ದೇಶದ ಉನ್ನತಿಗೆ ಏನಾದರು ಮಾಡಬೇಕೆಂಬ ಆಶಯ ನನ್ನದು.


This user is a member of WikiProject Education in India

ಉಪಪುಟಗಳು ಸಂಪಾದಿಸಿ

In this ಸದಸ್ಯspace:

ಸದಸ್ಯ:
Sagarika Prakash
ಸದಸ್ಯರ ಚರ್ಚೆಪುಟ: