ಸದ್ಗುರುವಿನ ದೆಸೆಯಿಂದ ಆವನೋರ್ವನ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸದ್ಗುರುವಿನ ದೆಸೆಯಿಂದ ಆವನೋರ್ವನ ಕಿವಿಯಲ್ಲಿ ಬ್ರಹ್ಮೋಪದೇಶವು ಹೇಳಲ್ಪಟ್ಟಿತ್ತು
ಆ ಶಬ್ದವೇ ಬೀಜವೆಸಿಕೊಂಡಿತ್ತಯ್ಯ. ಅದು ಆವುದಯ್ಯ ಎಂದಡೆ: ಶ್ರೀಗುರುವಿನ ದೆಸೆಯಿಂದ ಪಡೆದ ಶಿವಮಂತ್ರಾಕ್ಷರವೇ ಬೀಜವೆನಿಸಿಕೊಂಡಿತ್ತಯ್ಯ. ಅಂಥಾ ಪ್ರಾಣಿಯೆ ಜ್ಞಾನಕಾಯನೆನಿಸಿಕೊಂಬನಯ್ಯ. ಶಿವಮಂತ್ರೋಪದೇಶವಿಲ್ಲದಾತನು ಪ್ರಕೃತಿಕಾಯನೆನಿಸಿಕೊಂಬೆನಯ್ಯ. ಇದು ಕಾರಣ
ಪ್ರಕೃತಿಕಾಯವೆಂದು ಜ್ಞಾನಕಾಯವೆಂದು ಎರಡು ಭೇದವಾಗಿಪ್ಪುದಯ್ಯ. ಶಿವಮಂತ್ರದೀಕ್ಷೋಪದೇಶವಾಗಲಾಗಿ
ಪ್ರಕೃತಿಕಾಯ ಹೋಗಿ ಜ್ಞಾನಕಾಯುವಪ್ಪುದು ತಪ್ಪದಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.