ಸದ್ಯೋಜಾತ ಬದ್ಧಜ್ಞಾನಿ ವಾಮದೇವ ಆತುರಜ್ಞಾನಿ ಅಘೋರ ಕೋಪಜ್ಞಾನಿ ತತ್ಪುರುಷ ಕ್ಷಣಿಕಜ್ಞಾನಿ ಈಶಾನ್ಯ ಅತೀತಜ್ಞಾನಿ_[ಇದು] ಪರಿಯಲ್ಲ ನೋಡಾ. ಗುಹೇಶ್ವರಲಿಂಗದಲ್ಲಿ ಅವಿರಳಜ್ಞಾನಿ ಚನ್ನಬಸವಣ್ಣ [ಆತನ] ಶ್ರೀಪಾದಕ್ಕೆ ನಮೋನಮೋ ಎಂಬೆನು