ಸದ್‍ಭಕ್ತನಾದಾತನು ಸತ್‍ಪಾತ್ರದಾನಯುಕ್ತನಾಗಿರಬೇಕಲ್ಲದೆ ಅಪಾತ್ರದಾನವ ಮಾಡಲಾಗದು ನೋಡಾ. ಅಪಾತ್ರವೆಂದೊಡೆ :ನಾಲ್ಕು ವೇದವನೋದಿನ ಬ್ರಾಹ್ಮಣನಾದಡಾಗಲಿ
ಶಿವಭಕ್ತಿಯಿಲ್ಲದವಂಗೆ ಗೋದಾನ ಭೂದಾನ ಸುವರ್ಣದಾನ ಕನ್ನಿಕಾದಾನಂಗಳ ಕೊಟ್ಟರೆ ಮುಂದೆ ನರಕ ತಪ್ಪದು ನೋಡಾ. ಅದೆಂತೆಂದೊಡೆ :ಲಿಂಗಪುರಾಣೇ- ``ಚತುರ್ವೇದಧರೋ ವಿಪ್ರಃ ಶಿವಭಕ್ತಿವಿವರ್ಜಿತಃ