ಸಬಳದ ತುದಿಯಲ್ಲಿ ಕಟ್ಟಿದ ಗಂಟೆಯಂತೆ ಮಾತು ಲಿಂಗಾ ಲಿಂಗಾ ಎನುತ್ತ ಮೊನೆ ಇರಿವಂತೆ ಬೇಡವಯ್ಯಾ ಹುಸಿ. ಮಾತಿನಲ್ಲಿ ದಿಟ ಮನದಲ್ಲಿ ಸಟೆ ಬೇಡವಯ್ಯಾ. ಮನ ವಚನ ಕಾಯ ಒಂದಾಗದಿದ್ದರೆ ಕೂಡಲಸಂಗಯ್ಯನೆಂತೊಲಿವನಯ್ಯಾ