ಸರ್ವಗತ ಕೇಳಲಾಗದು. ಶಿವನೆಂದು


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸರ್ವಗತ
ಶಿವನೆಂದು
ಹೇಳುವ
ಮರುಳು
ಮಾನವರ
ಮಾತ
ಕೇಳಲಾಗದು.
ಅದೆಂತೆಂದೊಡೆ
:
ಸರ್ವಜೀವರುಗಳಂತೆ
ವನಿತಾದಿ
ವಿಷಯಪ್ರಪಂಚಿನಲ್ಲಿ
ಮಗ್ನವಾಗಿರ್ಪನೆ
ಶಿವನು
?
ಸರ್ವಜೀವರುಗಳಂತೆ
ತಾಪತ್ರಯಾಗ್ನಿಯಲ್ಲಿ
ನೊಂದು
ಬೆಂದು
ಕಂದಿ
ಕುಂದುವನೆ
ಶಿವನು
?
ಸರ್ವಜೀವರುಗಳಂತೆ
ಪುಣ್ಯಪಾಪ
ಸುಖದುಃಖ
ಸ್ವರ್ಗನರಕಂಗಳೆಂಬ
ದ್ವಂದ್ವಕರ್ಮಂಗಳ
ಹೊದ್ದಿರ್ಪನೆ
ಶಿವನು
?
ಸರ್ವಜೀವರುಗಳಂತೆ
ಉತ್ಪತ್ತಿ
ಸ್ಥಿತಿ
ಪ್ರಳಯಂಗಳೆಂಬ
ಕಷ್ಟ
ಬಂಧನಗಳಲ್ಲಿ
ಸಿಲ್ಕಿ
ಹೊದಕುಳಿಗೊಂಬನೆ
ಶಿವನು
?
ಇಂತೀ
ಭೇದವನರಿಯದೆ
ಸರ್ವಗತ
ಶಿವನೆಂದು
ನುಡಿದ
ಕಡುಪಾತಕ
ಜಡಜೀವಿಗಳ
ಎನಗೊಮ್ಮೆ
ತೋರದಿರಯ್ಯ
ಅಖಂಡೇಶ್ವರಾ.