ಸವಿಕಲ್ಪ ಸತ್ತಿತ್ತು, ನಿರ್ವಿಕಲ್ಪವೆಂಬ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸವಿಕಲ್ಪ ಸತ್ತಿತ್ತು
ನಿರ್ವಿಕಲ್ಪವೆಂಬ ಗರ್ವವಳಿದು
ತೆರಹಿಲ್ಲದ ಮಹಾಘನದೊಳಡಗಿತ್ತಾಗಿ. ಸಾಧ್ಯವಿಲ್ಲ
ಸಾಧಕನಿಲ್ಲ; ಪೂಜ್ಯನಿಲ್ಲ
ಪೂಜಕನಿಲ್ಲ; ದೇವನಿಲ್ಲ
ಭಕ್ತನಿಲ್ಲ. ಇವೇನುಯೇನೂ ಇಲ್ಲವಾಗಿ ನಾಮನಲ್ಲ
ನಿರ್ನಾಮನಲ್ಲ; ಸೀಮನಲ್ಲ
ನಿಸ್ಸೀಮನಲ್ಲ; ಇವೇನುಯೇನೂ ಇಲ್ಲದ ಸರ್ವಶೂನ್ಯನಿರಾಲಂಬವು
ನಿರ್ವಯಲು ನಿರಾಕಾರ ಪರವಸ್ತುವು
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.