ಸಾಕಾರ ಹದಿನೆಂಟುಕುಳವನಂಗದಲ್ಲಿ ಆಚರಿಸುತ್ತ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸಾಕಾರ ಹದಿನೆಂಟುಕುಳವನಂಗದಲ್ಲಿ ಆಚರಿಸುತ್ತ ಅಲ್ಲಲ್ಲಿಗೆ ಭಕ್ತ
ಅಲ್ಲಲ್ಲಿಗೆ ಮಾಹೇಶ್ವರ
ಅಲ್ಲಲ್ಲಿಗೆ ಪ್ರಸಾದಿಯಾಗಿಪ್ಪ ಆ ಸಾಕಾರವನೇನೆಂದುಪಮಿಸುವೆ ! ನಿರಾಕಾರ ಹದಿನೆಂಟುಕುಳವನಾತ್ಮನಲ್ಲಿ ಆಚರಿಸುತ್ತ ಅಲ್ಲಲ್ಲಿಗೆ ಪ್ರಾಣಲಿಂಗಿ
ಅಲ್ಲಲ್ಲಿಗೆ ಶರಣ
ಅಲ್ಲಲ್ಲಿಗೆ ಐಕ್ಯನಾಗಿಪ್ಪ ಆ ನಿರಾಕಾರವನೇನೆಂದುಪಮಿಸುವೆ ! ಇಂತು ಉಭಯಸ್ಥಲ ಒಂದಾಗಿ ನಿಂದ ನಿಜದ ಘನದಲ್ಲಿ ಕುಳವಡಗಿತ್ತು
ಕೂಡಲಚೆನ್ನಸಂಗಾ