ಸಾಕ್ಷಿ ಸತ್ತಿತ್ತು ಪತ್ರ ಬೆಂದಿತ್ತು ಲೆಕ್ಕ ತುಂಬಿತ್ತು ಜೀವ ಜೀವಿತದ ಆಸೆ ನಿಂದುದು ಭಾಷೆ ಹೋಯಿತ್ತು ದೇಶವೆಲ್ಲರಿಯೆ ಎನ್ನ ದೇವ ಚೆನ್ನಮಲ್ಲಿಕಾರ್ಜುನನ ನಂಬಿ ಹಂಬಲ ಮರೆದೆನಾಗಿ.