ಸಾಧ್ಯ ಸಾಧಕರಿಲ್ಲದಂದು ಪೂಜ್ಯ ಪೂಜಕರಿಲ್ಲದಂದು ದೇವ ಭಕ್ತನೆಂಬ ನಾಮ ತಲೆದೋರದಂದು ಉಪಾಸ್ಯ ಉಪಾಸಕರಿಲ್ಲದಂದು ಅಂಗಸ್ಥಲ ಲಿಂಗಸ್ಥಲವಾಗದಂದು ನಿನ್ನ ನಿಃಕಲ ಶಿವತತ್ವವೆಂದೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.