Pages (key to Page Status)
ಸಿರಿಯಾಳನ ಮಗನ ಬಾಣಸವ ಮಾಡಿಸಿ ಉಣಲೊಲ್ಲದೆ ಕಾಡಿದೆ. ಚೋಳನ ಮನೆಯಲು ಉಣಲೊಲ್ಲದೆ ಚೆನ್ನನ ಮನೆಯಲುಂಡೆ. ಒಬ್ಬರಿಗೊಂದು ಪರಿಯ ಮಾಡಿದೆ ಕೂಡಲಸಂಗಮದೇವಾ.