Pages   (key to Page Status)   


ಸುಖ ಬಂದಲ್ಲಿ ನಿಮ್ಮ ಹಾಡಿಹರಸುವೆನಯ್ಯ. ದುಃಖ ಬಂದಲ್ಲಿ ನಿಮ್ಮ ಕೋಪಿಸಿ ಬಯ್ವೆನಯ್ಯ. ಅದೇನು ಕಾರಣವೆಂದೊಡೆ : ಎನ್ನ ಸುಖದುಃಖಂಗಳಿಗೆ ನೀವೆ ಆಧಾರವಾದ ಕಾರಣ
ನಿಮ್ಮನೆ ಹಾಡುವೆನಯ್ಯ; ನಿಮ್ಮನೆ ಹೊಗಳುವೆನಯ್ಯ. ನಿಮ್ಮ ಮುಂದೆ ಎನ್ನ ಒಡಲ ಕಡು ದುಃಖವನೀಡಾಡುವೆನಯ್ಯ ಅಖಂಡೇಶ್ವರಾ.