ಸುಖ ಬಂದಡೆ ಪುಣ್ಯದ ಫಲವೆನ್ನೆನು ದುಃಖ ಬಂದಡೆ ಪಾಪದ ಫಲವೆನ್ನೆನು. ನೀ ಮಾಡಿದಡಾಯಿತ್ತೆಂದೆನ್ನೆನು ಕರ್ಮಕೆ ಕರ್ತುವೆ ಕಡೆಯೆಂದೆನ್ನೆನು ಉದಾಸೀನವಿಡಿದು ಶರಣೆನ್ನೆನು. ಕೂಡಲಸಂಗಮದೇವಾ ನೀ ಮಾಡಿದುಪದೇಶವು ಎನಗೀ ಪರಿಯಲ್ಲಿ- ಸಂಸಾರವ ಸವೆಯೆ ಬಳಸುವೆನು.