ಸುಚಿತ್ತದಿಂದ ನಿಮ್ಮ ನೆನೆಯಲೊಲ್ಲದೆನ್ನ ಮನ ಎಂತಯ್ಯಾ ಎನಗಿನ್ನಾವುದು ಗತಿ ಎಂತಯ್ಯಾ ಎನಗಿನ್ನಾವುದು ಮತಿ ಎಂತಯ್ಯಾ ಹರಹರಾ ಕೂಡಲಸಂಗಮದೇವಾ ಮನದ ಸಂತೈಸೆನ್ನ. 478