ಸುತ್ತಲಿಲ್ಲದ ವ್ಯಾಧ ಸುಳಿಯಲಿಲ್ಲದ ಮೃಗವು. ಒತ್ತಿದನು ಆ ಮೃಗವ ಇರುಬಿನಲ್ಲಿಗೆ ಅಯ್ಯಾ. `ಸೋವೋವ' `ಸೋವೋವ' ಎಂದೆನುತ್ತ ಒತ್ತಿದ ಮೃಗವು ಇರುಬುಗೊಂಡಿತ್ತು. ಇರುಬಿನ ಕುಳಿಯೊಳಗೆ ಕೊಲ್ಲದೆ ಕೊಂದನಲ್ಲಾ ಮೃಗವನು. ಅಳಿಯದೆ ಅಳಿದುದಲ್ಲಾ ! ಮಾಡಲಿಲ್ಲದ ಸಯದಾನ
ನೀಡಲಿಲ್ಲದ ಬೋನ ಅರ್ಪಿತವಿಲ್ಲದ ತೃಪ್ತಿ; ಗುಹೇಶ್ವರಲಿಂಗಕ್ಕೆ.