ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನೆದಡೆ ತಪ್ಪುವುದು ಅಪಮೃತ್ಯು ಕಾಲಕರ್ಮಂಗಳಯ್ಯಾ. ದೇವಪೂಜೆಯ ಮಾಟ ದುರಿತಬಂಧನದೋಟ. ಶಂಭು ನಿಮ್ಮ ನೋಟ ಹಿಂಗದ ಕಣ್ಬೇಟ. ಸದಾ ಸನ್ನಿತನಾಗಿ ಶರಣೆಂಬುದು ನಂಬುವುದು. ಜಂಗಮಾರ್ಚನೆಯ ಮಾಟ ಕೂಡಲಸಂಗನ ಕೂಟ. 177