ಸುರತರುವ ಬಿಟ್ಟು ಎಲವದ ಮರಕೆ ನೀರೆರೆವಂತೆ
ನೊರೆವಾಲ ಚಲ್ಲಿ ಕಾಟೆಯ ಬಯಸಿ ಬಾಯಾರುವಂತೆ
ತಾಯ ಮಾರಿ ತೊತ್ತ ಕೊಂಬವರಂತೆ
ರಂಭೆಯ ಬಿಟ್ಟು ಸಿಂಬೆಯ ಬಯಸುವ ಶಿಖಂಡಿಗಳಂತೆ
ನಿತ್ಯವಲ್ಲದ ನಿರುತವಲ್ಲದ ಸತ್ತು ಹೋಹ
ಮಾಯಾಪ್ರಪಂಚ ಮಚ್ಚಿದ ಮನುಜರು
ಮುಕ್ತ್ಯಂಗನೆಯನಪ್ಪಿ ಭಕ್ತ್ಯಮೃತವ ಸೇವಿ[ಸುವ] ನಿತ್ಯಪದದ ಸುಖವ ವ್ಯರ್ಥಕಾಯರಿವರೆತ್ತಬಲ್ಲರು ಹೇಳಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.