ಸೂಕ್ಷ ್ಮನಾಳದಲ್ಲಿ ಶುಭ್ರಮೂರ್ತಿಯ ಕಂಡೆನಯ್ಯ. ಲೋಕಾಧಿಲೋಕದೊಳು ಏಕೋಭರಿತನಾಗಿ ಸರ್ವ ಸಾಕ್ಷಿಕನಾಗಿದಾನೆ ನೋಡಿರಯ್ಯ. ಆಕಾರವಳಿದು ನಿರಾಕಾರಮಯವಾಗಲು ಲೋಕೇಶ ತಾನು ತಾನಾದ ಲಿಂಗೈಕ್ಯನೇನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.