ಸೆಜ್ಜೆಯನುಪ್ಪರಿಸಿ ಶಿವಲಿಂಗ ಕರಸ್ಥಲಕ್ಕೆ


Title vachana saahitya
Author Akka Mahaadevi
Year 1130-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸೆಜ್ಜೆಯನುಪ್ಪರಿಸಿ ಶಿವಲಿಂಗ ಕರಸ್ಥಲಕ್ಕೆ ಬರಲು
ಪ್ರಜ್ವಲಿಸಿ ತೊಳತೊಳಗಿ ಬೆಳಗುತ್ತಿಹ ಕಾಂತಿಯೊಳು ಪ್ರಜ್ವಲಿಸಿ
ದೃಷ್ಟಿನಟ್ಟು ಒಜ್ಜರಿಸಿ ಸುರಿವ ಅಶ್ರುಜಲ ಶಿವಸುಖ ಸಾರಾಯನಲ್ಲಿ ಸಜ್ಜನಸತಿಯ ರತಿಯೊಡಗೂಡಿ ಲಜ್ಜೆಗೆಟ್ಟು ನಿಮ್ಮ ನೆರೆದೆನು ಚೆನ್ನಮಲ್ಲಿಕಾರ್ಜುನಾ.