ಸೇವಂತಿ ಸೇವಂತಿ - ಜಾಜೀ ಮಲ್ಲಿಗೆ ನೋಡೆ

ಚಿತ್ರ: ಸೇವಂತಿ ಸೇವಂತಿ
ಸಾಹಿತ್ಯ: ಎಸ್.ನಾರಾಯಣ್
ಸಂಗೀತ: ಎಸ್.ಎ.ರಾಜಕುಮಾರ್
ಗಾಯನ: ವಿಜಯ್ ರಾಘವೇಂದ್ರ, ಶ್ರೇಯ ಘೋಶಾಲ್


ಜಾಜೀ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ |೨|
ಎನ್ನಾ ಮ್ಯಾಲೆ ಮುನಿವಾರೆ
ಜಾಜೀ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನಾ ಮ್ಯಾಲೆ ಮುನಿವಾರೆ

ಕಮಲದ ಹೂ ನಿನ್ನ ಕಾಣದೆ ಇರಲಾರೆ
ಮಲ್ಲಿಗೆ ಮಾಯೆ ಒ ಒ ಓ
ಕೇದಿಗೆ ಗರಿ ನಿನ್ನ ಅಗಲಿರಲಾರೆ
ಮಲ್ಲಿಗೆ ಮಾಯೆ ಒ ಒ ಓ

ಜಾಜೀ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನಾ ಮ್ಯಾಲೆ ಮುನಿವಾರೆ

ಕೆನ್ನೆ ಕಸ್ತುರಿ ಬಾಲೆ
ರಾಮ ಲಕುಮಿ ಮೇಲೆ
ಮಾರುದ್ದ ಜಡೆಯೋಳೆ
ಬಿಸ್ತರದ ಹೆಣ್ಣೆ |೨|

ಎಳ್ಳು ಹೂವಿನ ಸೀರೆ
ಬೆಳ್ಳಿ ಕಾಲುಂಗೂರ
ಹಳ್ಳದ ನೀರು ತರುತ್ತಾಳೆ ನನ ಗೆಳತಿ
ಬಣ್ಣದ ಬಾಲೆ ನೀ ಹೇಳೆ
ಎನ್ನ ಮ್ಯಾಲೆ ಮುರಿವಾರೆ

ಜಾಜೀ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನಾ ಮ್ಯಾಲೆ ಮುನಿವಾರೆ

ಕೋಗಿಲೆ ದನಿಚಂದ
ನಾಗರ ಹೆಡೆ ಚಂದ
ದೇವಲೋಕದ ಪದುಮಿನಿ ನೀನು

ಮುನಸೆಲ್ಲಾ ನನ ಗೆಳೆಯ
ಕನಸಲ್ಲಾ ನಂಬು ನನ್ನ
ಚೆನ್ನಾದ ಚಲುವ ನೀ ಕೇಳೊ
ಹಣ್ಣು ಹೋಳಿಗೆ ತುಪ್ಪಾ.. ಅಡಿಗೆಯ ನಾ ಮಾಡಿ
ಬತ್ತೀ ನೀ ನಿತ್ತ ಗುರುತೀಗೆ
ಬತ್ತಿ ನೀ ಜಾಣ
ಬರುವ ದಾರಿ ಕಾಯೊ
ಎನ್ನಾ ಮ್ಯಾಲೆ ಮುನಿವಾರೆ

ಜಾಜೀ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನಾ ಮ್ಯಾಲೆ ಮುನಿವಾರೆ

ಕಮಲದ ಹೂ ನಿನ್ನ ಕಾಣದೆ ಇರಲಾರೆ
ಮಲ್ಲಿಗೆ ಮಾಯೆ ಒ ಒ ಓ
ಕೇದಿಗೆ ಗರಿ ನಿನ್ನ ಅಗಲಿರಲಾರೆ
ಮಲ್ಲಿಗೆ ಮಾಯೆ ಒ ಒ ಓ

ಜಾಜೀ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನಾ ಮ್ಯಾಲೆ ಮುನಿವಾರೆ..


ಟೆಂಪ್ಲೇಟು:ಪಿವಿಡಿ