ಸ್ಥಲದಿಂದ ನಡೆನುಡಿಯಾಯಿತ್ತು ನಿಃಸ್ಥಲದಿಂದ ನುಡಿನಡೆಗೆಟ್ಟಿತ್ತು. ನೋಡಲೊಡನೆ ಸ್ಥಲವಾಗಿ ತೋರಿತ್ತು (ಆರಯ್ಯಲೊಡನೆ ನಿಃಸ್ಥಲವಾಗಿ ತೋರಿತ್ತು.) ಸ್ಥಲವೂ ಅಲ್ಲ ನಿಃಸ್ಥಲವೂ ಅಲ್ಲ ನೋಟವೆ ಕೂಟ ಕೂಡಲಚೆನ್ನಸಂಗಾ