ಸ್ಥಿರಾಸನದಲ್ಲಿರ್ದು ಸ್ವರವು ನಾಲ್ಕರ ನೆಲೆಯರಿದು ಉರವಣಿಸುವ ಪವನಂಗಳ ತರಹರಿಸಿ ಇಂದ್ರಿಯಗಳನೊಂದು ಮುಖವಂ ಮಾಡಿ ಬಂಧಿಸಿ ಹಾರುವ ಹಂಸೆಯ ಬೋಧಿಸಿ ನಿಲಿಸಿ ಪರಮಾಮೃತದ ಕುಟುಕನಿಕ್ಕಿ ಸಲಹುತ್ತಿರ್ದೆನಯ್ಯ ಅನುದಿನದಲ್ಲಿ. ದಾಸೋಹವಳಿದು ಸೋಹವಾಗಲು
ಹಂಸೆಯ ಗತಿಗೆಟ್ಟು ಪರಮಹಂಸವಾಗಿ ಸೋಹಂ ಸೋಹಂ ಸೋಹಂ ಎಂದುದು ಗುಹೇಶ್ವರಾ.