ಸ್ಥೂಲ ಪಂಚಭೂತಕಾಯದ ಪಂಚತತ್ವಂಗಳ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸ್ಥೂಲ ಪಂಚಭೂತಕಾಯದ ಪಂಚತತ್ವಂಗಳ ವಿವರಿಸಿ ಬೋಧಿಸಿ ಕಳೆದು
ಸೂಕ್ಷ್ಮ ಪಂಚಭೂತಕಾಯದ ತನ್ಮಾತ್ರಗುಣಂಗಳ ವಿವರದ ಭೇದವ ಭೇದಿಸಿ ತೋರಿ ಕಳೆದು
ಕಾರಣಪಂಚಭೂತ ಕಾಯದ ಕರಣವೃತ್ತಿಗಳ ಮಹಾವಿಚಾರದಿಂದ ತಿಳುಹಿ ವಿವರಿಸಿ ಕಳೆದು
ಸ್ಥೂಲಪಂಚಾಚಾರದಿಂದ ತಿಳುಹಿ ವಿವರಿಸಿ ಕಳೆದು
ಸ್ಥೂಲಪಂಚಭೂತಕಾಯದಲ್ಲಿ ಇಷ್ಟಲಿಂಗವ ಪ್ರತಿಷೆ*ಯ ಮಾಡಿ ಸದಾಚಾರಸ್ಥಳಕುವ ನೆಲೆಗೊಳಿಸಿ
ಸೂಕ್ಷ್ಮಪಂಚಭೂತಕಾಯದಲ್ಲಿ ಪ್ರಾಣಲಿಂಗ ಪ್ರತಿಷೆ*ಯ ಮಾಡಿ
ಮಹಾವಿಚಾರದ ಅನುಭಾವವ ನೆಲೆಗೊಳಿಸಿ
ಕಾರಣಪಂಚಭೂತಕಾಯದಲ್ಲಿ ತೃಪ್ತಿಲಿಂಗವ ಪ್ರತಿಷೆ*ಯ ಮಾಡಿ ಪರಮಾನಂದಸುಜ್ಞಾನವ ನೆಲೆಗೊಳಿಸಿ;_ ಇಂತೀ ಸ್ಥೂಲಸೂಕ್ಷ್ಮ ಕಾರಣವೆಂಬ ತನುತ್ರಯಂಗಳನೇಕೀಭವಿಸಿ ತೋರಿ
ಪೂರ್ವಜನ್ಮದ ನಿವೃತ್ತಿಯ ಮಾಡಿ
ಲಿಂಗಜನ್ಮದ ಪ್ರತಿಷೆ*ಯ ಮಾಡಿ ಎನ್ನ ಕೃತಾರ್ಥನ ಮಾಡಿದ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನಯ್ಯಾ ಕೂಡಲಚೆನ್ನಸಂಗಮದೇವಾ