ಸ್ವರದ ಹುಳ್ಳಿಯ ಕೊಂಡು ಗಿರಿಯ ತಟಾಕಕ್ಕೆ ಹೋಗಿ ಹಿರಿಯರು ಓಗರವ ಮಾಡುತ್ತಿಪ್ಪರು. ಗಿರಿ ಬೇಯದಾಗಿ ಓಗರವಾಗದು. ಅರ್ಪಿತವಿಲ್ಲಾಗಿ ಪ್ರಸಾದವಿಲ್ಲ ಗುಹೇಶ್ವರಾ