ಹರನ ಕೊರಳಲಿಪ್ಪ ಕರೋಟಿಮಾಲೆಯ


Pages   (key to Page Status)   

ಹರನ ಕೊರಳಲಿಪ್ಪ ಕರೋಟಿಮಾಲೆಯ ಶಿರದ ಲಿಖಿತವ ಕಂಡು
ಮರುಳ ತಂಡಗಳು ಓದಿ ನೋಡಲು
ಇವನಜ ಇವ ಹರಿ ಇವ ಸುರಪತಿ ಇವ ಧರಣೇಂದ್ರ ಇವನಂತಕನೆಂದು ಹರುಷದಿಂದ ಸರಸವಾಡಿತ ಕಂಡು
ಹರ ಮುಕುಳಿತನಾಗಿ ನಕ್ಕ
ನಮ್ಮ ಕೂಡಲಸಂಗಮದೇವ.