ಹರ[ಹಿ] ಮಾಡುವುದು ಹರಕೆಯ ಕೇಡು ನೆರಹಿ ಮಾಡುವುದು ಡಂಬಿನ ಭಕ್ತಿ. ಹರ[ಹ]ಬೇಡ ನೆರಹಬೇಡ ಬಂದ ಬರವನರಿತು ಮಾಡಬಲ್ಲಡೆ ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ. 228