ಹರಿ ಹೊಲಬನರಿಯ ಬ್ರಹ್ಮ ಮುಂದನರಿಯ ರುದ್ರ ಲೆಕ್ಕವ ಮರೆದು ಜಪವನೆಣಸುತ್ತೆ ೈದಾನೆ. ಈಶ್ವರ ಪವನಯೋಗದಲ್ಲಿ ಮಗ್ನನಾದ. ಸದಾಶಿವ ಭಾವದಲ್ಲಿ ಭ್ರಮಿತನಾದ. ಒಂದಂಡಜದೊಳಗಣ ಬಾಲಕರೈವರು ನಿಮ್ಮನೆತ್ತ ಬಲ್ಲರು ಗುಹೇಶ್ವರಾ.