Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಹಲವು
ವೇಷವ
ಧರಿಸಿ
ಹಲವು
ಭಾಷೆಯ
ಕಲಿತು
ಹಲವು
ದೇಶಕ್ಕೆ
ಹರಿದಾಡಿದಡೇನು
?
ಕಾಲಾರಿಯಂತಲ್ಲದೆ
ನಿಜವಿರಕ್ತಿಯಿಲ್ಲ
ನೋಡಾ.
ಅದೇನು
ಕಾರಣವೆಂದೊಡೆ
:
ತನುವಿನ
ಆಶೆಯಾಮಿಷ
ಹಿಂಗದಾಗಿ.
ಊರಾಶ್ರಯವ
ಬಿಟ್ಟು
ಕಾಡಾಶ್ರಮ
ಗಿರಿಗಂಹರದಲ್ಲಿರ್ದಡೇನು
?
ಹಗಲು
ಕಣ್ಣುಕಾಣದ
ಗೂಗೆಯಂತಲ್ಲದೆ
ನಿಜವಿರಕ್ತಿಯಿಲ್ಲ
ನೋಡಾ.
ಅದೇನು
ಕಾರಣವೆಂದೊಡೆ
:
ಮನದ
ಮಾಯವಡಗದಾಗಿ.
ಹಸಿವು
ತೃಷೆಯ
ಬಿಟ್ಟು
ಮಾತನಾಡದೆ
ಮೌನವಾಗಿರ್ದಡೇನು
?
ಕಲ್ಲು
ಮರ
ಮೋಟು
ಗುಲ್ಮಂಗಳಂತಲ್ಲದೆ
ನಿಜವಿರಕ್ತಿಯಿಲ್ಲ
ನೋಡಾ.
ಅದೇನು
ಕಾರಣವೆಂದೊಡೆ
:
ವಿಷಯವ್ಯವಹಾರ
ಹಿಂಗದಾಗಿ.
ನಿದ್ರೆಯ
ತೊರೆದು
ಎದ್ದು
ಕುಳ್ಳಿರ್ದಡೇನು
?
ಕಳ್ಳ
ಊರಹೊಕ್ಕು
ಉಲುಹು
ಅಡಗುವನ್ನಬರ
ಮರೆಯಲ್ಲಿ
ಕುಳಿತಂತಲ್ಲದೆ
ನಿಜವಿರಕ್ತಿಯಿಲ್ಲ
ನೋಡಾ.
ಅದೇನು
ಕಾರಣವೆಂದೊಡೆ:
ಅಂತರಂಗದ
ಘನಗಂಭೀರ
ಮಹಾಬೆಳಗಿನ
ಶಿವಸಮಾಧಿಯನರಿಯದ
ಕಾರಣ.
ಇಂತಪ್ಪ
ಹೊರವೇಷದ
ಡಂಭಕ
ಜೊಳ್ಳುಮನದವರ
ವಿರಕ್ತರೆಂದಡೆ
ಮಚ್ಚರಯ್ಯ
ನಿಮ್ಮ
ಶರಣರು
ಅಖಂಡೇಶ್ವರಾ.