Pages (key to Page Status)
ಹಸಿವು ತೃಷೆ ನಿದ್ರೆ ವಿಷಯಂಗಳ ಮರೆದೆ ನೀವು ಕಾರಣ ! ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳ ಮರೆದೆ ನೀವು ಕಾರಣ ! ಪಂಚೇಂದ್ರಿಯ ಸಪ್ತಧಾತು ಅಷ್ಟಮದಂಗಳ ಮರೆದೆ. ನೀವು ಕಾರಣ ! ಕೂಡಲಸಂಗಮದೇವಯ್ಯಾ ನಿಮ್ಮ ಶರಣರಿಗೆ ಅಪ್ಯಾಯನವಾದಡೆ ಎನಗೆ ತೃಪ್ತಿಯಾಯಿತ್ತು.