ಹಾರುವರ ಮನೆಯ ದೇವಿಯ ಹದಿರು ಚದರಿನಲ್ಲಿ ಹಲಬರು ಸಿಕ್ಕಿ ಕೆಟ್ಟರು ನೋಡ. ಹಾರುವರ ಕೊಂದು ಹದಿರು ಚದಿರು ಅಳಿದಲ್ಲದೆ ದೇವರ ಕಾಣಬಾರದು ಪ್ರಾಣಲಿಂಗ ಸಂಬಂಧಿಗಳೆಂಬರೆ ನಾಚದವರನೇನೆಂಬೆನಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.