ಹಾಳುಮನೆಯ ಹೊಸತಿಲಲ್ಲಿ ನಿಂದಿದ್ದು
ಆರೂ ಬಾರದ ಬಟ್ಟೆಯ ನೋಡುತ್ತ
ಆರಿಂಗಾಗದಿರವು ನಮಗಾಯಿತ್ತೆನುತಲಿ
ಆರಯ್ಯ ಬಂದವರಿಗೆ ಶಂಕೆಯಿಲ್ಲ ! ಕಾಲಿಲ್ಲದೆ ಬಂದವರು
ಕೈಯಿಲ್ಲದೆ ಕೊಂಬವರು
ಮೇಲು ತಲೆ ಇದ್ದವರು ನುಡಿವಾಗ ಮಾರಾರಿಯ ಬೆಳಸ
ಆರಯ್ಯ ಸಂತವಿಡುವರೆಂದಡೆ_ ಸಾರಾಯಂಗಲ್ಲದೆ ಮತ್ತಿನ್ನಾರಿಗಹುದು ಹೇಳಾ ? ಸಂತೆಯ ಗುಡಿಲ ಸೂಳೆಗೆ ಕೊಂತವ ಕೊಟ್ಟಡೆ ಎಂತು ಬಚ್ಚಿಡಬಹುದು ? ಮರುಳುತನವು
ಶಂಕಿಸಿತು ಎನ್ನ ಮನವು
ಹಿಂದು ಮುಂದು ಕೂಡುವರಿಲ್ಲೆಂದು ಉಮ್ಮಳದಲ್ಲಿ. ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಪ್ರಸಾದವ ಕೊಂಡು ನಿರುಪಮಸುಖಿಯಾದೆನು