ಹಾವಿನೊಳಗಣ ಸಂಗ ಆವಾಗಲೆಂದರಿಯಬಾರದಯ್ಯ.



Pages   (key to Page Status)   


ಹಾವಿನೊಳಗಣ ಸಂಗ ಆವಾಗಲೆಂದರಿಯಬಾರದಯ್ಯ. ಕಿಚ್ಚಿನೊಳಗಣ ಸಂಗ ಸುಟ್ಟು ಭಸ್ಮವ ಮಾಡುವದಯ್ಯ. ಲಿಂಗದೃಷ್ಟಿ ತಪ್ಪಿ
ಅಂಗನೆಯರ ನೋಟ ಬೇಟ ಕಂಗಳ ಕೆಡಿಸಿ ಭಂಗಿತರ ಮಾಡುವುದಯ್ಯ. ಪರಸ್ತ್ರೀಯರ ಕೂಟ ಪಂಚಮಹಾಪಾತಕದಲ್ಲಿಕ್ಕುವುದಯ್ಯ. ಧರೆಯೊಳಕೊಳ್ಳದು; ಹಿರಿಯರು ಮಚ್ಚರು. ಹಿರಿಯರು ಮಚ್ಚರಾಗಿ ಶಿವ ಮುನ್ನವೆ ಮಚ್ಚನು. ನಾಯಕನರಕ ತಪ್ಪದಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.