ಹಿಂದಣಜನ್ಮದ ಸಂಸಾರವ ಮರೆದು ಮುಂದಣ ಭವಬಂಧನಂಗಳ ಜರಿದು ಸಂದೇಹ ಸಂಕಲ್ಪಗಳ ಹರಿದು ನಿಮ್ಮ ಅವಿರಳಭಕ್ತಿಯ ಬೆಳಗಿನಲ್ಲಿ ಬೆರೆದು ಓಲಾಡುವ ಮಹಾಮಹಿಮರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.