ಹಿತವಿದೆ ಸಕಲಲೋಕದ ಜನಕ್ಕೆ,


Title vachana saahitya
Author Akka Mahaadevi
Year 1130-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಹಿತವಿದೆ ಸಕಲಲೋಕದ ಜನಕ್ಕೆ
ಮತವಿದೆ ಶ್ರುತಿಪುರಾಣಾಗಮದ
ಗತಿಯಿದೆ
ಭಕುತಿಯ ಬೆಳಗಿನುನ್ನತಿಯಿದೆ. ಶ್ರೀ ವಿಭೂತಿಯ ಧರಿಸಿದಡೆ ಭವವ ಪರಿವುದು ದುರಿತಸಂಕುಳವನೊರಸುವುದು ಹರನ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯದಲ್ಲಿರಿಸುವುದು. ನಿರುತವಿದು ನಂಬು ಮನುಜಾ
ಜನನಭೀತಿ ಈ ವಿಭೂತಿ. ಮರಣಭಯದಿಂದ ಅಗಸ್ತ್ಯ ಕಾಶ್ಯಪ ಜಮದಗ್ನಿಗಳು ಧರಿಸಿದರಂದು ನೋಡಾ. ಶ್ರೀಶೈಲ ಚೆನ್ನಮಲ್ಲಿಕಾರ್ಜುನನ ಒಲಿವ ವಿಭೂತಿ.