ಹಿರಿದೊಂದು ಮಾರಿಮಸಣಿಯ ಕೈಯಿಲ್ಲದ ಮೋಟ ಹಿಡಿದನು. ಉಲಿವ ಕಮಲದಲುದಕವಿರ್ದುದು ಕುಡಿವವರಿಲ್ಲದೆ ಬತ್ತಿ ಹೋಯಿತು. ನರರು ಸುರರು ಅಧಿದೇವತೆಗಳು ಕುಲವನರಸುತ ಕೂಗುತೈದಾರೆ. ತನ್ನ ಸುಳುಹಿಗೆ ತನ್ನ ನಿಲುವಿಗೆ ತಾನೆ ಬೆರಗಾದನು ಗುಹೇಶ್ವರ !