ಹುಟ್ಟಿದಲ್ಲಿಯೆ ಹೊಂದುವುದೆಲ್ಲರಿಗೆಯೂ ಸ್ವಭಾವ.



Pages   (key to Page Status)   


ಹುಟ್ಟಿದಲ್ಲಿಯೆ ಹೊಂದುವುದೆಲ್ಲರಿಗೆಯೂ ಸ್ವಭಾವ. ಪುಣ್ಯಪಾಪವೆಲ್ಲರಿಗೆಯೂ ಸ್ವಭಾವ. ಮಹಾಶಿವತತ್ವದಲ್ಲಿ ಹುಟ್ಟಿದ ಶಿವಭಕ್ತರು
ಆಗಮತತ್ವದಲ್ಲಿ ಹೊಂದಿದಡೇನು ? ಆ ಪುಣ್ಯಪಾಪವಿಲ್ಲಾಗಿ
ಅವರು ಮಹಾನುಭಾವರು. ಆದಡೇನು? ಲೋಕದ ಪರಿಯೆ ?_ಅಲ್ಲ. ಇದ
ಲೋಕದ ಪರಿಯೆಂಬ ಅಜ್ಞಾನಿಗಳನೇನೆಂಬೆ ಗುಹೇಶ್ವರಾ.