Pages(key to [[Help:Page Status{{!}}Page Status]])
ಹುಟ್ಟುವಲ್ಲಿ ಭವಿ ಮರಳಿ ಭಕ್ತನ ಮಾ[ಡೆ] ಪೂರ್ವಾಶ್ರಯವ ಕಳೆದು ಹೊಂದುವಲ್ಲಿ ಭವಿಯಾಗಿ ಹೋಹರ ಮುಟ್ಟಲಾಗದು. ಅವನ ಮುಟ್ಟಿದವ ಮುನ್ನವೆ ವ್ರತಗೇಡಿ. ಅವನ ಶ್ರಾದ್ಧಕಾಲವೆ ಶ್ವಾನಮಾಂಸ ಕ್ರಿಯಾಕಾಲವೆ ಕ್ರಿಮಿಗಳು ತದ್ದಿನವೆ ಮದ್ಯಮಾಂಸ. ಇದು ಕಾರಣ ಕೂಡಲಸಂಗಮದೇವಾ ಅವನ ಮನೆಯ ವಿಚಾರಿಸದೆ ಹೊಕ್ಕವಂಗೆ ನಾಯಕನರಕ.