ಹುಸಿಯುಳ್ಳವ ಭಕ್ತನಲ್ಲ, ವಿಷಯವುಳ್ಳವ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಹುಸಿಯುಳ್ಳವ ಭಕ್ತನಲ್ಲ
ವಿಷಯವುಳ್ಳವ ಮಾಹೇಶ್ವರನಲ್ಲ
ಆಸೆಯುಳ್ಳವ ಪ್ರಸಾದಿಯಲ್ಲ
ಜೀವಗುಣವುಳ್ಳವ ಪ್ರಾಣಲಿಂಗಿಯಲ್ಲ
ತನುಗುಣವುಳ್ಳವ ಶರಣನಲ್ಲ
ಜನನಮರಣವುಳ್ಳವ ಐಕ್ಯನಲ್ಲ. ಈ ಆರರ ಅರಿವಿನ ಅರ್ಕದ ಸಂಪತ್ತಿನ ಭೋಗ ಹಿಂಗಿದಡೆ ಸ್ವಯಂ ಜಾತನೆಂಬೆ._ಆ ದೇಹ ನಿಜದೇಹವೆಂಬೆ ಆ ನಿಜದೇಹ ಇರಿದರರಿಯದು
ತರಿದರರಿಯದು
ಹೊಯ್ದರರಿಯದು
ಬಯ್ದರರಿಯದು
ಸ್ತುತಿಸಿದರರಿಯದು
ನಿಂದಿಸಿದರರಿಯದು
ಪುಣ್ಯವನರಿಯದು
ಪಾಪವನರಿಯದು
ಸುಖವನರಿಯದು ದುಃಖವನರಿಯದು
ಕಾಲವನರಿಯದು
ಕರ್ಮವನರಿಯದು ಜನನವನರಿಯದು
ಮರಣವನರಿಯದು_ ಇಂತೀ ಷಡುಸ್ಥಲದೊಳಗೆ ತಾ ಒಂದು ನಿಜವಿಲ್ಲವಾಗಿ ನಾವು ಹಿರಿಯರು ನಾವು ಗುರುಗಳು ನಾವು ಸಕಲಶಾಸ್ತ್ರಸಂಪನ್ನ ಷಡುಸ್ಥಲದ ಜ್ಞಾನಿಗಳು ಎಂಬ ಮೂಕೊರೆಯರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ? ಕುತ್ತಗೆಯುದ್ದ ಹೂಳಿಸಿಕೊಂಡು ಮುಗಿಲುದ್ದಕ್ಕೆ ಹಾರಲುಂಟೆ ?